ರಾಮಮಂದಿರ ಶಿಲಾನ್ಯಾಸದ ವೇಳೆ ಉಡುಪಿ ಶ್ರೀಕೃಷ್ಣಮಠದ ಗೋ ಶಾಲೆಯಲ್ಲಿ ಗಂಡು ಕರುವಿಗೆ ಜನ್ಮ ನೀಡಿದ ದೇಶಿ ಗೋವು ಕಪಿಲೆ

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುತ್ತಿದ್ದ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣಮಠದ ಗೋಶಾಲೆಯಲ್ಲಿ ಕಪಿಲೆ ಎಂಬ ದೇಸಿ ದನವು ಗಂಡು ಕರುವಿಗೆ ಜನ್ಮ ನೀಡಿದೆ. ಪರ್ಯಾಯ ಅದಮಾರು  ಮಠದ ಈಶಪ್ರಿಯ ಶ್ರೀಗಳ ಅಚ್ಚುಮೆಚ್ಚಿನ ಮಣ್ಣಿನ ಬಣ್ಣ ಕರು ಇದಾಗಿದ್ದು, ಅವರು ಈ ಕರುವಿಗೆ ‘ಶ್ರೀರಾಮ’ ಎಂದು ನಾಮಕರಣ ಮಾಡಿದ್ದಾರೆ.