ಕನಕದಾಸ ಅಧ್ಯಯನ, ಸಂಶೋಧನಾ ಕೇಂದ್ರದ ಸದಸ್ಯರಾಗಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನೇಮಕ.
ಉಡುಪಿ: ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರನ್ನಾಗಿ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರನ್ನು ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾಯಕಾವ್ಯ, ಅವನು ಹೆಣ್ಣಾಗಬೇಕು, ನಕ್ಷತ್ರ ನಕ್ಕ ರಾತ್ರಿ, ಮುಂತಾದ ಕವನ ಸಂಗ್ರಹಗಳು, ತೊಗಲು ಗೊಂಬೆ ಕಾದಂಬರಿ, ಇರವಿನ […]