ಉಡುಪಿ: ಜೂನ್ 18ರಂದು ಜಾನಪದ ಸ್ಪರ್ಧೆ- 2023 ಕಾರ್ಯಕ್ರಮ: ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ
ಉಡುಪಿ: ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಇವರ ಸಹಯೋಗದಲ್ಲಿ ಜಾನಪದ ಸ್ಪರ್ಧೆ- 2023 ಕಾರ್ಯಕ್ರಮವು ಇದೇ ಬರುವ ಜೂನ್ 18ರಂದು ಬೆಳಿಗ್ಗೆ 9.30ಕ್ಕೆ ಅಂಬಾಗಿಲಿನ ಅಮೃತ ಗಾರ್ಡನ್‌ನಲ್ಲಿ ನಡೆಯಲಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ಕಲಾವಿದ ರವಿ ಪಾಣಾರ ಪಡ್ಡಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಲ್ಲೂರು ಫ್ಯಾಮಿಲಿ […]