ಉಡುಪಿ: ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ

ಉಡುಪಿ: ವಿಶ್ವ ಶಾಂತಿಗೆ ಕೃಷ್ಣನ ಸಂದೇಶ ಅತೀ ಅಗತ್ಯ. ಇಂದು ವಿವಿಧ ದೇಶಗಳಲ್ಲಿ ಯುದ್ಧ, ಸಂಘರ್ಷ, ಹಾನಿ, ಪ್ರಾಕೃತಿಕ ವಿಕೋಪ ನಡೆಯುತ್ತಿದೆ. ಇದೆಲ್ಲವನ್ನು ನಿಲ್ಲಿಸಬೇಕಾದರೆ ಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ವಿಸ್ತರಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಉಡುಪಿ ಪುತ್ತಿಗೆ ಮಠದಲ್ಲಿ ಇಂದು ಪುತ್ತಿಗೆ ಪರ್ಯಾಯದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕೃಷ್ಣನ ಭಗವದ್ಗೀತೆಯಲ್ಲಿ ಅನೇಕ ವಿಚಾರಗಳಿವೆ. ಇದು ವಿಶ್ವಕ್ಕೆ ಮ್ಯಾನೇಜ್ ಮೆಂಟ್ ಕೋರ್ಸ್ ಆಗಬೇಕು. ಸಣ್ಣ ಸಣ್ಣ ವಿಚಾರಗಳಿಗೆ ಘರ್ಷಣೆ, ಗಲಾಟೆ […]