ಉಡುಪಿ: ಮೃತ ಕೋವಿಡ್ ರೋಗಿಯ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಸಮಾಜ ಸೇವಕರು.!
ಉಡುಪಿ: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಸಂಬಂಧಿಕರು ಅಸಹಾಯಕರಾದ ಹಿನ್ನೆಲೆಯಲ್ಲಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ವಿನಯಚಂದ್ರ ಸಾಸ್ತಾನ ಅವರು ಸಂಬಂಧಿಕರ ಸಮಕ್ಷಮದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಕೋಟೇಶ್ವರ ಸಾರ್ವಜನಿಕ ಸ್ಥಳದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ರೋಗಿಯನ್ನು ಸಮಾಜಸೇವಕ ವಿನಯಚಂದ್ರ ಸಾಸ್ತಾನ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ರೋಗಿ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟರು. ಬಳಿಕ ಮೃತನ ಸಂಬಂಧಿಕರನ್ನು ಪತ್ತೆಗೊಳಿಸಲಾಯಿತು. ಆದರೆ, ಸಂಬಂಧಿಕರಿಗೆ […]