ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ನೇತೃತ್ವದಲ್ಲಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಕೃಷ್ಣ ಸ್ಪರ್ಧೆ: 100 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗಿ.

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ನೇತೃತ್ವದಲ್ಲಿ ಹಾಗೂ ದೇವಾಡಿಗರ ಸಂಘ ಹಿರಿಯಡ್ಕ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಕೃಷ್ಣ ಸ್ಪರ್ಧೆಯು ಪ್ರಪ್ರಥಮ ಬಾರಿಗೆ ಹಿರಿಯಡ್ಕ ಶ್ರೀ ವೀರಭದ್ರ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಜರುಗಿತು. 100 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಗೆ ನೋಂದಾವಣೆ ಮಾಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಕಾರಣವಾಗಿತ್ತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ಪದಕ ನೀಡಿ […]