ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಸಾಕ್ಷಿಯಾದ ಕೈಪುಂಜಾಲು ಉರೂಸ್

ಉಡುಪಿ: ಹಿಂದೂಗಳ ಜಾಗದಲ್ಲಿರುವ ದರ್ಗಾ ಕಾಪು ಸಮುದ್ರ ಕಿನಾರೆಯಲ್ಲಿರುವ ಸಯ್ಯದ್ ಅರಭೀ ವಲಿಯುಲ್ಲಾಹಿರವರ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ವಾರ್ಷಿಕ ಸಫರ್ ಝಿಯಾರತ್’ (ಉರೂಸ್) ಸಮಾರಂಭವು ಸಂಭ್ರಮದಿಂದ ನಡೆಯಿತು. ಇದರಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಕೂಡ ಭಾಗಿಯಾಗುತ್ತಾರೆ. ಕಾಪು ಕಡಲ ತಡಿಯಲ್ಲಿ ಮೊಗವೀರ ಸಮಾಜದ ಶ್ರೀಯಾನ್ ಕುಟುಂಬಕ್ಕೆ ಸೇರಿದ ಜಾಗದಲ್ಲಿದೆ ಈ ದರ್ಗಾ. ಕ್ಯಾಲೆಂಡರ್‌ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್ ನಡೆಯುತ್ತದೆ. ಇದರಲ್ಲಿ ಉಡುಪಿ ಮಾತ್ರವಲ್ಲದೇ ಕೇರಳದಿಂದ ಭಟ್ಕಳದವರೆಗಿನ ಸಹಸ್ರಾರು ಮಂದಿ […]