ಹೆಬ್ರಿ: ವಿದ್ಯಾರ್ಥಿಗಳು ಕನಸು ಕಾಣಬೇಕು, ನಮ್ಮ ಕನಸಿಗೆ ನಾವೇ ತೊಡಕಾಗಬಾರದು: ಡಾ.ವಿರೂಪಾಕ್ಷ ದೇವರಮನೆ.

ಹೆಬ್ರಿ: ವಿದ್ಯಾರ್ಥಿಗಳು ಕನಸು ಕಾಣಬೇಕು. ನಾವು ಕಾಣುವ ಕನಸು ನಮ್ಮನ್ನು ಗುರಿಯಡೆಗೆ ತಲುಪಿಸುತ್ತದೆ. ಈ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಬೇಕೇ ಹೊರತು ನಮ್ಮ ಕನಸಿಗೆ ನಾವೇ ತೊಡಕಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶದಷ್ಟು ಬೇರೆ ಯಾವುದೇ ಹಂತದಲ್ಲಿ ಸಿಗುವುದಿಲ್ಲ. ನಮಗೆ ನಾವೇ ಗೌರವವನ್ನು, ನಂಬಿಕೆಯನ್ನು, ರೂಡಿಸಿಕೊಂಡಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಉಡುಪಿಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಹೇಳಿದರು. ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ನಿನಗೆ ನೀನೇ ಶಿಲ್ಪಿ ಕಾರ್ಯಕ್ರಮದಡಿ […]