ಉಡುಪಿ:ಮುಂದಿನ ಎರಡು ದಿನಗಳ ಕಾಲ ಭಾರಿ ಗಾಳಿ, ಮಳೆ ಮುನ್ಸೂಚನೆ
ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದಿಂದಾಗಿ ರಾಜ್ಯದ ಕರಾವಳಿಭಾಗದಲ್ಲಿಯೂ ಇದರ ಪರಿಣಾಮ ಇರುವುದರಿಂದ ಮುಂದಿನ 2 ದಿನಗಳ ಕಾಲ ಹೆಚ್ಚಿನ ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ. ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್, ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾಸಮಿತಿಯ ಸದಸ್ಯರು ಕಡ್ಡಾಯವಾಗಿ, ಕೇಂದ್ರ ಸ್ಥಾನದಲ್ಲಿದ್ದು ವಿಪತ್ತನ್ನು ನಿಭಾಯಿಸಬೇಕು. ಸಾರ್ವಜನಿಕರು ಹಾಗೂ ಮೀನುಗಾರರುನದಿ, ನೀರಿರುವ ಪ್ರದೇಶ ಮತ್ತು […]