ಎದೆ ಮಟ್ಟದ ನೆರೆಯ ನೀರಿನಲ್ಲೇ ಓಡಾಡುತ್ತಿದ್ದ ಕುಟುಂಬಕ್ಕೆ ತಹಶಿಲ್ದಾರ್ ಭರವಸೆ

ಉಡುಪಿ: ಜಿಲ್ಲೆಯ ಕಾಪು ತಾಲ್ಲೂಕಿನ ಎರ್ಮಾಳ್ ಗ್ರಾಮದ ಅಡ್ವೆಕೋಡಿ ಪ್ರದೇಶದ ತಾರಾನಾಥ್ ಎಂಬುವರ ಕುಟುಂಬ ನೆರೆ ನೀರಿನಲ್ಲೇ ನಡೆದುಕೊಂಡು ಬಂದು ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿದು ಸ್ವತಃ ತಹಶಿಲ್ದಾರ್ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಶೀಘ್ರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ. ಒದ್ದೆಬಟ್ಟೆಯಲ್ಲೇ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು:ತಾರಾನಾಥ್ ರವರ ಮಕ್ಕಳಾದ ಪ್ರಜ್ಞಾ ಮತ್ತು ಪ್ರಜ್ವಲ್ ಕಾಲೇಜಿಗೆ ಹೋಗುವಾಗ ಈ ಎದೆ ಮಟ್ಟದ ನೆರೆ ನೀರಿನಲ್ಲೇ ತೊಯ್ದುಕೊಂಡು ಹೋಗಬೇಕು. ಪುಸ್ತಕದ ಚೀಲವನ್ನೂ ಹೊತ್ತೊಯ್ಯಬೇಕು. ಇದೇ […]