ಉಡುಪಿ: ಧಾರಾಕಾರ ಮಳೆಗೆ ಹೊಸ ರಸ್ತೆಗಳೂ ಹೊಂಡಮಯ

ಉಡುಪಿ: ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದ್ದು, ಉಡುಪಿ ನಗರದ ಬಹುತೇಕ ರಸ್ತೆಗಳಲ್ಲಿ ಹೊಂಡಗುಂಡಿಗಳು ಬಿದ್ದಿವೆ. ಕಳೆದ ಒಂದು ವಾರದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ.ಅಂಬಾಗಿಲು ಮಣಿಪಾಲ ರಸ್ತೆಯ ಶೀಂಬ್ರಾ ದೇವಸ್ಥಾನಕ್ಕೆ ಹೋಗುವ ಜಂಕ್ಷನ್ ನಲ್ಲಿ ಇತ್ತೀಚೆಗಷ್ಟೇ ರಸ್ತೆ ಡಾಮರೀಕರಣಗೊಂಡಿತ್ತು. ಮೊದಲ ಮಳೆಗಾಲಕ್ಕೇ ಇಲ್ಲಿ ದೊಡ್ಡ ಹೊಂಡ ಬಿದ್ದಿದೆ. ಮಳೆಗೆ ಈ ಹೊಂಡದಲ್ಲಿ ನೀರು ತುಂಬಿರುವುದರಿಂದ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ. ಮೂರು ಕಡೆಯಿಂದ ಈ ಜಂಕ್ಷನ್ ಮೂಲಕ ವಾಹನಗಳು ಸಾಗಬೇಕಾದರೆ […]