ಉಡುಪಿ: ಜುವೆಲ್ಲರಿ ವರ್ಕ್‌ಶಾಪ್‌ ಗೆ ನುಗ್ಗಿ ಅಪಾರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ; ಸಿಸಿಟಿವಿಯಲ್ಲಿ ಬಯಲಾಯಿತು ಕಳ್ಳರ ಕೃತ್ಯ

ಉಡುಪಿ: ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನ ಮಾರುತಿ ವೀಥಿಕಾ ಬಳಿ ಜುವ್ಯೆಲ್ಲರಿ ವರ್ಕ್‌ಶಾಪ್‌ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ. ಕಳ್ಳತನ‌ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರ್ಕ್‌ಶಾಪ್‌ನ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಕೃತ್ಯದಲ್ಲಿ ಇಬ್ಬರು ಮುಸುಕುಧಾರಿಗಳು ಇರುವುದು ಕಂಡುಬಂದಿದೆ. ಅದರಲ್ಲಿ ಒಬ್ಬಾತ ಮೊದಲಿಗೆ ಒಳಗೆ ಬಂದು ಒಳಗಿನ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹಾಕಿ ದೃಶ್ಯ ಕಾಣದಂತೆ ಮಾಡಿರುವುದು ಸೆರೆಯಾಗಿದೆ. ಕಳ್ಳರು ಕಾರು ಮತ್ತು ಬೈಕಿನಲ್ಲಿ ಬಂದು […]