ಜಿ. ಎಂ. ಗ್ಲೋಬಲ್ ಶಾಲೆ : ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಬ್ರಹ್ಮಾವರ: ಬ್ರಹ್ಮಾವರದ ಜಿ. ಎಂ. ಗ್ಲೋಬಲ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ರೆನಾಲ್ಡೋ ಸೀಕ್ವೆರ , ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿ. ಆರ್. ಎ. ಸೋಲ್ಯೂಶನ್ ಮಂಗಳೂರು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅವಕಾಶ ಇರುವಲ್ಲಿ ಅದನ್ನು ಬಳಸಿಕೊಂಡು ಪ್ರತಿಭೆಯನ್ನು ಹೊರ ಹಾಕಬೇಕು. ವಿದ್ಯಾರ್ಥಿ ಪರಿಷತ್ತಿನ ಮುಖಾಂತರ ನಾಯಕತ್ವ ಗುಣವನ್ನು ಬಾಲ್ಯದಲ್ಲಿಯೇ ಬೆಳಸಿಕೊಳ್ಳಲು ಅನುಕೂಲವಾಗುತ್ತದೆ. ವಸತಿ ನಿಲಯದ ವಿದ್ಯಾರ್ಥಿಗಳು […]