ಧುಮ್ಮುಕಿ ಹರಿಯುತ್ತಿರುವ ದುರ್ಗಾ ಫಾಲ್ಸ್: ನೀರಿಗಿಳಿದು ಸೆಲ್ಫಿ, ರೀಲ್ಸ್ ಮಾಡದಂತೆ ಗ್ರಾಮಸ್ಥರ ಮನವಿ
ಉಡುಪಿ: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕಾರ್ಕಳ ತಾಲೂಕಿನ ದುರ್ಗಾ ಫಾಲ್ಸ್ ಧುಮ್ಮುಕಿ ಹರಿಯುತ್ತಿದೆ. ಸ್ವರ್ಣ ನದಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲು ಕೊರಕಲ್ಲುಗಳ ಮಧ್ಯೆ ಹರಿದು ಸಾಗುವ ಹಿನ್ನೆಲೆಯಲ್ಲಿ ಇಲ್ಲಿ ನೈಸರ್ಗಿಕವಾಗಿ ಜಲಪಾತ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಗಾ ಫಾಲ್ಸ್ ಕುರಿತು ವಿಡಿಯೋ ಮತ್ತು ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಸದ್ಯ ಇಲ್ಲಿ ಪ್ರವಾಸಿಗ ದಂಡು ದಂಡಾಗಿ ಬರುತ್ತಿದ್ದಾರೆ. ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿರುವ ದುರ್ಗಾ ಫಾಲ್ಸ್ ನೋಡಲು […]