ಗಿಡಮರಗಳ ನಾಶದಿಂದ ಉಷ್ಣಾಂಶ ಹೆಚ್ಚುತ್ತಿದೆ: ಡಾ. ಎಚ್. ಗಂಗಾಧರ್ ಭಟ್

ಉಡುಪಿ: ಗಿಡಮರಗಳನ್ನು ಕಡಿದು ಕಾಂಕ್ರಿಟ್‌ ಕಟ್ಟಡಗಳನ್ನು ನಿರ್ಮಿಸುತ್ತಿರುವ ಪರಿಣಾಮ ವಾತಾವರಣದ ಉಷ್ಣಾಂಶ ಹೆಚ್ಚುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಭೂ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಚ್‌. ಗಂಗಾಧರ್‌ ಭಟ್‌ ಆತಂಕ ವ್ಯಕ್ತಪಡಿಸಿದರು. ಉಡುಪಿ ವಿಜ್ಞಾನ ಫೌ-ಂಡೇಶನ್‌ ಫಾರ್‌ ಇನೋವೇಶನ್‌ ರಿಸರ್ಚ್‌ ಹಾಗೂ ಬೆಳ್ಳಾರೆ ಜಿಐಎಸ್‌ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಉಡುಪಿ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಭೌಗೋಳಿಕ ಮಾಹಿತಿ ವ್ಯವಸ್ಥೆ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೂರರಿಂದ […]