ಉಡುಪಿ:ವಚನ ಸಾಹಿತ್ಯದ ಪ್ರಚಾರದಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಡಾ.ಫ.ಗು ಹಳಕಟ್ಟಿ : ಅಬೀದ್ ಗದ್ಯಾಳ್

ಉಡುಪಿ: ವಚನಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಮಹತ್ವವಾದ ಘಟ್ಟವಾಗಿದ್ದು, ತತ್ವ ಸಿದ್ದಾಂತವನ್ನುಜನಸಾಮಾನ್ಯರಿಗೆ ಸರಳವಾಗಿ ಮನದಟ್ಟು ಮಾಡುವಲ್ಲಿ ವಚನ ಸಾಹಿತ್ಯ ಬಹಳ ಪ್ರಮುಖವಾಗಿದೆ. ಡಾ.ಫ.ಗು ಹಳಕಟ್ಟಿಯವರುವಚನಗಳನ್ನು ಸಂಗ್ರಹಿಸಿ ಶರಣರ ವಚನಗಳ ಪ್ರಚಾರ ಮಾಡಲು ತಮ್ಮ ಬದುಕನ್ನು ಮುಡಿಪಾಗಿಟ್ಟವರು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದರು. ಅವರು ಇಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎ.ವಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ […]