ಉಡುಪಿ: ಕುಂಜಿಬೆಟ್ಟು-ದೊಡ್ಡಣ್ಣಗುಡ್ಡೆ ಕಿರು ಸೇತುವೆ ಕುಸಿಯುವ ಭೀತಿ: ಬದಲಿ ರಸ್ತೆಯನ್ನು ಬಳಸುವಂತೆ ಮನವಿ.
ಉಡುಪಿ: ಎಂಜಿಎಂ ಮತ್ತು ದೊಡ್ಡಣ್ಣಗುಡ್ಡೆಯನ್ನು ಸಂಪರ್ಕಿಸುವ ಚಕ್ರತೀರ್ಥ ಸಗ್ರಿ ರಸ್ತೆಯ ನಡುಭಾಗದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಕಿರು ಸೇತುವೆಯು ಕುಸಿಯುವ ಭೀತಿಯಲ್ಲಿದೆ. ವಿಪರೀತ ಮಳೆ ಅಬ್ಬರದಿಂದ ನೀರಿ ನ ಪ್ರಮಾಣ ಹೆಚ್ಚಾಗಿದ್ದು ಸೇತುವೆ ಕುಸಿಯುವ ಅಪಾಯದಲ್ಲಿದೆ ಸದ್ಯ ಈ ರಸ್ತೆ ಯನ್ನು ಬ್ಯಾರಿಕೆಡ್ ಇಟ್ಟು ಬಂದ್ ಮಾಡಲಾಗಿದೆ. ಸಾರ್ವಜನಿಕರು ಹಾಗೇನೆ ವಾಹನ ಚಾಲಕರು ಈ ರಸ್ತೆಯನ್ನು ಉಪಯೋಗಿಸದೆ ಬದಲಿ ರಸ್ತೆಯನ್ನು ಬಳಸಬೇಕಾಗಿ ನಗರ ಸಭಾ ಸದಸ್ಯರು ಹಾಗೂ ಸ್ಥಳೀಯರು ಸಾರ್ವಜನಿಕರು ಮನವಿ ಮಾಡಿ ಕೊಂಡಿದ್ದಾರೆ.