ಉಡುಪಿ:ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆರಾಧನಾ ರಂಗಪೂಜೆ, ಪಲ್ಲಕಿ ಉತ್ಸವ

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯ ದಶಮಿಯಂದು ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ|ಮೂ| ಸರ್ವೇಶ ತಂತ್ರಿಗಳ ತಂತ್ರತ್ವದಲ್ಲಿ, ವೇ|ಮೂ| ವಿಖ್ಯಾತ್ ಭಟ್ ನೇತೃತ್ವದಲ್ಲಿ ಪುರೋಹಿತ ಗಣೇಶ್ ಸರಳಾಯರ ಸಹಕಾರದಲ್ಲಿ ನೆರವೇರಿತು. ಸಂಜೆ ಬಲಿ ಉತ್ಸವ, ರಂಗಪೂಜಾ ಮಹೋತ್ಸವ, ಮಹಾಮಂತ್ರಾಕ್ಷತೆ ನೆರವೇರಿತು. ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತು ಆಕರ್ಷಣೆಯಾಗಿತ್ತು. ಪಲ್ಲಕಿ ಉತ್ಸವ, ವಸಂತ ಪೂಜೆ ನಡೆಯಿತು. ವಸಂತ ಪೂಜೆಯಲ್ಲಿ ಸಮರ್ಪಿಸುವ ಅಷ್ಟಾವಧಾನದಲ್ಲಿ ವೇ|ಮೂ| […]