ಉಡುಪಿ:ಉಡುಪಿ ಜಿಲ್ಲಾ ಮೂಲ ಗೇಣಿದಾರರ ಸಮಾವೇಶ

ಉಡುಪಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಅತ್ಯಂತ ಐತಿಹಾಸಿಕವಾಗಿದ್ದು ಸ್ವಾತಂತ್ರ್ಯ ದೊರಕಿ ಏಳುವರೆ ದಶಕಗಳ ಅನಂತರವೂ ಜೀವಂತವಾಗಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಈ ರೀತಿಯ ಶೇೂಷಣೆ ನಿವಾರಿಸುವರೆ ರಾಜ್ಯ ಸರ್ಕಾರ 2011ರಲ್ಲಿ ಮೂಲಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿ ಪಡಿಸುವ ಕಾಯಿದೆ ನಿರ್ಣಯಿಸಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಹಿತಾಸಕ್ತಿ ಮೂಲಿದಾರರು ಹೈಕೋರ್ಟ್ ಮೆಟ್ಟಿಲು ಹತ್ತಿದರು.ಇದರ ಪರಿಣಾಮವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಮೂಲಗೇಣಿದಾರರ ಬೇಡಿಕೆ ನ್ಯಾಯಯುತವಾಗಿದೆ […]