ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮವು ಮಂಗಳ ವಾರದಂದು ಸಂತೆಕಟ್ಟೆಯ ಲಕ್ಷ್ಮೀನಗರದ ಗ್ರೀನ್ ಏಕರ್ಸ್ ನಲ್ಲಿ ಜರಗಿತು. ಕೇಮಾರು ಸಾಂದೀಪನೀ ಸಾಧನಾ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯೋಸಿಸ್‌ನ ವಿಕಾರ್ ಜನರಲ್ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು. ಈಶ ವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು […]