ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ ಅದಲು ಬದಲು: ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿಯ ಎಡವಟ್ಟು ಬಹಿರಂಗ

ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಅದಲು ಬದಲು ಆದ ಘಟನೆ ನಡೆದಿದೆ. ಕೋಟೇಶ್ವರದ ಮೂಲದ ಗಂಗಾಧರ್ ಎಂಬ ವ್ಯಕ್ತಿ ನ್ಯೂಮೋನಿಯದಿಂದ ಮೃತಪಟ್ಟಿದ್ದರು. ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಗಂಗಾಧರ್ ಅವರ ಶವ ನೀಡುವ ಬದಲು ಕಾರ್ಕಳ ಮೂಲದ ವ್ಯಕ್ತಿಯ ಶವ ನೀಡಿ ಎಡವಟ್ಟು ಮಾಡಿದ್ದಾರೆ. ಕುಂದಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವ ವೇಳೆ ಶವ ಬದಲಾಗಿರುವ ವಿಚಾರ ಕುಟುಂಬಸ್ಥರಿಗೆ ತಿಳಿದಿದ್ದು, ಇದರಿಂದ ಕುಟುಂಬಸ್ಥರು ಗೊಂದಲಕ್ಕೀಡಾಗಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯ ಡಾಕ್ಟರ್, ಸಿಬಂದಿಗೂ ಬಂತು ಕೊರೋನಾ‌ ಸೋಂಕು:10 ಮಂದಿಗೆ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಂದುವರಿದಿದ್ದು, ಇದೀಗ ಅಜ್ಜರಕಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ಸೋಂಕು ಕಾಲಿಟ್ಟಿದೆ. ಇಲ್ಲಿನ ವೈದ್ಯರು, ಸಿಬ್ಬಂದಿ ಸಹಿತ ಹತ್ತು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.