ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಸಂಭ್ರಮ
ಉಡುಪಿ: ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಸಂಭ್ರಮ ಕಾರ್ಯಕ್ರಮ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಇಂದು ನಡೆಯಿತು. ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಸರಕಾರವು ಪ್ರಸ್ತುತ ಅಂಗವಿಕಲರಿಗೆ ನೀಡುತ್ತಿರುವ 1400 ರೂ. ಪಿಂಚಣಿ ಯಾವುದಕ್ಕೂ ಸಾಲುವುದಿಲ್ಲ. ಈ ಮೊತ್ತದಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಅಸಾಧ್ಯ. ಈ ವಿಶೇಷ ಮಕ್ಕಳು ಜನಸಾಮಾನ್ಯರಂತೆ ಬದುಕಲು ಆಗಲ್ಲ. ಇಂತಹ ಮಕ್ಕಳಿಗೆ ಸರಕಾರಿ ಕೆಲಸದಲ್ಲೂ ಸರಿಯಾದ […]