ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಉಡುಪಿ: ವಿದೇಶದಿಂದ ಉಡುಪಿ ಜಿಲ್ಲೆಗೆ ಸುಮಾರು 1000 ಜನರು ಆಗಮಿಸಿ ಈಗಾಗಲೇ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಜಿಲ್ಲಾಡಳಿತದ, ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳು ಸುತ್ತಮುತ್ತಲಿನ ಮನೆಗಳಿಗೆ ನೋಟೀಸ್ ನೀಡುವ ಮೂಲಕ ಮಾಹಿತಿ ನೀಡಿದ್ದಾರೆ. ಅದಲ್ಲದೇ ಅಂತವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನೆಯಿಂದ ಹೊರಗೆ ಬಾರದಂತೆ ವಿನಂತಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇಂದು ತಿಳಿಸಿದರು. ಹೋಮ್ ಕ್ವಾರಂಟೈನ್ ಅವಧಿ ಮುಗಿಯುವ ತನಕ ಕಟ್ಟುನಿಟ್ಟಾಗಿ ಹೊರಗಡೆ ಬರುವಂತಿಲ್ಲ. ಇದನ್ನು ಉಲ್ಲಂಘಿಸಿ ಅಂತಹ ವ್ಯಕ್ತಿಗಳು […]