ಮುಂದಿನ ತಲೆಮಾರಿಗೆ ಅರಣ್ಯ ಉಳಿಸಿ :ಜಿ.ಜಗದೀಶ್

ಉಡುಪಿ : ನಮ್ಮ ಹಿಂದಿನ ತಲೆಮಾರಿನವರು ಅರಣ್ಯವನ್ನು ಉಳಿಸಿ, ಬೆಳೆಸಿದ ಕಾರಣ ಅದರ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ, ನಾವೂ ಸಹ ನಮ್ಮ ಮುಂದಿನ ತಲೆಮಾರಿನ ಪ್ರಯೋಜನಕ್ಕೆ ಅರಣ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್‍ಕ್ಲಬ್ ಉಡುಪಿ ಸಹಯೋಗದೊಂದಿಗೆ, ಬಡಗಬೆಟ್ಟುವಿನ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಡೆದ ವೃಕ್ಷೋತ್ಸವ 2019 ಅರಣ್ಯ, ವನ್ಯಜೀವಿ […]