ಉಡುಪಿ: ಪ್ರವಾಹ ಪೀಡಿತರಿಗೆ ಜಿಲ್ಲಾಡಳಿತದಿಂದ ನೆರವು

ಉಡುಪಿ:  ಎಲ್ಲಿ ನೋಡಿದರಲ್ಲಿ ನಾನಾ ಬಗೆಯ  ವಸ್ತುಗಳ ರಾಶಿ, ಪ್ರತಿ ವಸ್ತುಗಳನ್ನೂ ವಿಂಗಡಿಸಿ ಜೋಪಾನವಾಗಿ ಒಂದೆಡೆ ಸಂಗ್ರಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು, ಸಂಗ್ರಹಿಸಿದ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಭದ್ರವಾಗಿ ಪ್ಯಾಕ್ ಮಾಡಿ, ಲಾರಿಗೆ ಲೋಡ್ ಮಾಡುತ್ತಿರುವ ಪುರುಷ ಸಿಬ್ಬಂದಿಗಳು, ಇಲ್ಲಿ ಅಧಿಕಾರಿ, ನೌಕರ ಎಂಬ ಭೇದ ವಿಲ್ಲದೇ ಎಲ್ಲರಿಗೂ ಸಮಾನವಾಗಿ ಬಿಡುವಿಲ್ಲದ ಕೆಲಸ. ಈ ದೃಶ್ಯ ಕಂಡು ಬಂದದ್ದು, ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ.     ರಾಜ್ಯದ ಅನೇಕ ಜಿಲ್ಲೆಗಳ ಪ್ರವಾಹ ಪೀಡಿತ ನಿರಾಶ್ರಿತರ ನೆರವಿಗಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ […]