ಪ.ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ :ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯ ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 800 ಹಾಸಿಗೆಗಳುಳ್ಳ ಎನ್.ಎ.ಬಿ.ಹೆಚ್. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ 75% ಹುದ್ದೆಗಳನ್ನು ಮೀಸಲಿರಿಸುವ ಭರವಸೆಯ ಮೇರೆಗೆ ಕೌಶಲಾಭಿವೃದ್ದಿ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಗುರುವಾರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಒಟ್ಟು 123 ಮಂದಿಗೆ ತರಬೇತಿಗೆ ಅವಕಾಶವಿದ್ದು, ಈ ಕುರಿತಂತೆ ಸೆಪ್ಟಂಬರ್ 12 ರಂದು ಉಡುಪಿಯ ಪುರಭವನದಲ್ಲಿ ಉದ್ಯೋಗ ಮೇಳ ನಡೆಸುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ […]