ಉಡುಪಿ: ಆರೋಗ್ಯ ನಿರೀಕ್ಷಕರ ಮೇಲೆ ನಗರಸಭೆ ಸದಸ್ಯನಿಂದ ಹಲ್ಲೆ

ಉಡುಪಿ: ಉಡುಪಿ ನಗರಸಭೆ ಸದಸ್ಯರೊಬ್ಬರು ನಗರಸಭೆ ಆರೋಗ್ಯ ನಿರೀಕ್ಷಕರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆಸಿದೆ.ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್​ ಹಲ್ಲೆಗೆ ಒಳಗಾದವರು. ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್​ನ ಸದಸ್ಯ ಯೋಗೀಶ್​ ಹಲ್ಲೆ ಮಾಡಿದವರು. ಹಲ್ಲೆಗೆ ಒಳಗಾಗಿರುವ ಆರೋಗ್ಯ ನಿರೀಕ್ಷಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.ವಡಭಾಂಡೇಶ್ವರ ಪರಿಸರದಲ್ಲಿ ರಸ್ತೆಯ ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಗೆ ಮಂಗಳವಾರ ಬಂದ ಯೋಗೀಶ್​ […]