ಗೋವಿನ ಮೇಲಿನ ಕ್ರೌರ್ಯಗಳ ಸಮಾಪ್ತಿಗೆ 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರ ಹವನ

ಉಡುಪಿ: ನಾಡಿನಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಗೋವಧೆ , ಗೋವಿನ ಮೇಲಿನ ಕ್ರೌರ್ಯಗಳ ಸಮಾಪ್ತಿಗೆ ಸರ್ಕಾರಗಳ ಬದಲಾಗಿ ಭಗವಂತನಿಗೇ ಮೊರೆ ಹೋಗುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಒಂದು ವಾರ ಪರ್ಯಂತ ವಿಷ್ಣು ಸಹಸ್ರನಾಮ‌ಪಾರಾಯಣ ಮತ್ತು ಶಿವ ಪಂಚಾಕ್ಷರ ಜಪಾನುಷ್ಠಾನಕ್ಕೆ ಕರೆ ನೀಡಿದ್ದರು. ಬುಧವಾರ ಅಭಿಯಾನ ಸಮಾಪ್ತಿಯ ಹಿನ್ನೆಲೆಯಲ್ಲಿ ಸುಮಾರು 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರ ಹವನ ನಡೆಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ .ಈ ಬಗ್ಗೆ ಸಂದೇಶ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ […]