ಉಡುಪಿಯಲ್ಲಿ ಮತ್ತೆ ಹೊಸದಾಗಿ ಆರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲು

ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ  ಬಿಡುಗಡೆಗೊಳಿಸಿದ ಕೋವಿಡ್-19 ಸಂಬಂಧಿಸಿದ ಬುಲೆಟಿನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದು ಹೊಸದಾಗಿ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ನಿನ್ನೆಯವರೆಗೆ 15 ಪ್ರಕರಣಗಳು ವರದಿಯಾಗಿದ್ದು, ಇಂದಿನ 6 ಸೇರಿದಂತೆ ಒಟ್ಟು 21 ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ.