ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಡಿ.ಕೆ.ಶಿವಕುಮಾರ್.

ಉಡುಪಿ: ಉಪಮುಖ್ಯಮಂತ್ರಿಯಾಗಿ ಆಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು, ಸಲಹೆ, ಸೂಚನೆಗಳೊಂದಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿ ಹೋದರು. ‘ವ್ಯಕ್ತಿ ಪೂಜೆಯನ್ನು ಬಿಡಿ.. ಪಕ್ಷದ ಪೂಜೆ ಮಾಡಿ… ಜಾತಿ ಆಧಾರದ ರಾಜಕಾರಣವನ್ನು ಬಿಟ್ಟುಬಿಡಿ.. ಎಲ್ಲಾ ವರ್ಗದವರನ್ನು ಜೊತೆಯಲ್ಲಿ ಕರೆದೊಯ್ಯುವ ಸಂಕಲ್ಪ ಮಾಡಿ. ಆಗ ಪಕ್ಷ ಮತ್ತೆ ಗೆಲುವಿನ ಹಾದಿಗೆ ಬರಲು ಸಾಧ್ಯವಾಗುತ್ತದೆ.’ ಎಂದು ಡಿಕೆಶಿ ನುಡಿದರು.ಹಿಂದೆ […]