ಯುವ ಭಾರತೀಯ ಶಾಸ್ತ್ರೀಯ ಗಾಯಕರಿಗೆ ಪ್ರಪ್ರಥಮ ರಾಷ್ಟ್ರೀಯ ಸ್ಫರ್ಧೆಯನ್ನು ಆಯೋಜಿಸಿದ ಗ್ರೇಸ್ ಫೌಂಡೇಶನ್
ಜನಪ್ರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ, ಪದ್ಮಭೂಷಣ ಪಂಡಿತ್ ಸಿ.ಆರ್.ವ್ಯಾಸ್ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಗುಣಿಜಾನ್ ರಿಸರ್ಚ್ ಆರ್ಟ್ ಕಲ್ಚರ್ ಆಂಡ್ ಎಜುಕೇಶನ್ (ಗ್ರೇಸ್) ಫೌಂಡೇಶನ್ ‘ಗುಣಿಜಾನ್ ಬಂದಿಶ್ ಪ್ರತಿಯೋಗಿತ” ಎಂಬ ಅಖಿಲ ಭಾರತ ಶಾಸ್ತ್ರೀಯ ಗಾಯನ ಸ್ಫರ್ಧೆಯನ್ನು ಆರಂಭಿಸಿದೆ.ಗ್ರೇಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಪಂಡಿತ್ ಸಿ.ಆರ್.ವ್ಯಾಸ್ ಅವರ ಪುತ್ರ ಶಶಿ ವ್ಯಾಸ್ ಅವರು ಈ ಪ್ರತಿಭಾ ಶೋಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಮತ್ತು ಈ ಕಾರ್ಯಕ್ರಮದ ರೂಪುರೇಷೆಯು ಪಂಡಿತ್ ಸಿ.ಆರ್.ವ್ಯಾಸ್ ಅವರ ಹಿರಿಯ ಶಿಷ್ಯೆ ಅಪರ್ಣಾ ಕೇಳ್ಕರ್ ನಿರ್ವಹಿಸಿದ್ದಾರೆ. […]