ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ ಎಂಜಿನಿಯರ್ಸ್‌ ದಿನಾಚರಣೆ

ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತಶಯನ ಹಾಲ್‌ನಲ್ಲಿ ಬುಧವಾರ ಎಂಜಿನಿಯರ್ಸ್‌ ದಿನಾಚರಣೆ ನಡೆಯಿತು. ಮಂಗಳೂರು ಅಸೋಸಿಯೇಶನ್ ಆಫ್ ವ್ಯಾಲ್ಯುವರ್ಸ್‌‌ನ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಪ್ರಾಮಾಣಿಕತೆ, ನಿರ್ವಂಚನೆಯಿಂದ ಕೆಲಸ ಮಾಡಿದಾಗ ಸತ್ಫಲ ದೊರೆಯುವುದರಲ್ಲಿ ಸಂಶಯವಿಲ್ಲ. ಸದಾ ಖುಷಿಯಿಂದ, ಎಲ್ಲರೊಂದಿಗೂ ಪ್ರೀತಿಯಿಂದ ಇದ್ದು ಸಿಕ್ಕಿದ್ದನ್ನು ದಕ್ಕಿಸಿಕೊಂಡು, ಇದ್ದುದರಲ್ಲಿ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು. ನಮ್ಮನ್ನು ದ್ವೇಷಿಸುವವರಿಗೂ ಒಳತನ್ನು ಮಾಡುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸುವ ಗುಣ ಬೆಳೆಸಿಕೊಂಡರೆ ಬೆಳೆಯಬಹುದು ಎಂದರು. ಮಣಿಪಾಲದ ಡಿಪಾರ್ಟ್‌ಮೆಂಟ್ ಆಫ್ […]