ಉಡುಪಿ: ಕ್ರಿಸ್ಮಸ್ ಆಚರಣೆಗೆ ಸಜ್ಜುಗೊಂಡ ಚರ್ಚ್ ಗಳು; ಇಂದು ರಾತ್ರಿ ಹಬ್ಬದ ಸಂಭ್ರಮ

ಉಡುಪಿ: ಕರಾವಳಿಯಲ್ಲಿ ಕ್ರಿಸ್ಮಸ್ ಹಬ್ಬದ ಕೊನೇ ಹಂತದ ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ 24ರ ಮಧ್ಯರಾತ್ರಿಯ ವೇಳೆ ಕ್ರಿಸ್ತರು ಜನಿಸಿದ ಘಳಿಗೆಯನ್ನು ಸ್ಮರಿಸಿ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಸಲಿದೆ. ಮಂಗಳವಾರ ರಾತ್ರಿ ಎಲ್ಲ ಚರ್ಚ್ ಗಳಲ್ಲಿ ಕ್ರಿಸ್ಮಸ್ ಹಬ್ಬದ ಜಾಗರಣೆ ಆಚರಿಸಿ ಕ್ರಿಸ್ತ ಜಯಂತಿಯ ವಿಶೇಷ ಬಲಿಪೂಜೆಗಳನ್ನು ಸಲ್ಲಿಸುತ್ತಾರೆ. ಕ್ಯಾರೊಲ್ ಗಾಯನದೊಂದಿಗೆ ಸಂಭ್ರಮಾಚರಣೆ ಆರಂಭವಾಗುತ್ತದೆ. ನಗರದ ಎಲ್ಲ ಚರ್ಚ್‌ಗಳಲ್ಲಿ ಮಂಗಳವಾರ ಸಂಜೆ 7 ಗಂಟೆಯಿಂದ ಹಬ್ಬದ ಮೆರುಗು ಶುರುವಾಗುತ್ತದೆ. ಕ್ಯಾರೊಲ್‌ಗಳ ಗಾಯನದ ಬಳಿಕ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆಗಳು […]