ಟ್ರಕಿಂಗ್ ವೇಳೆ 11 ಮಂದಿ ಕಾಡಿನಲ್ಲಿ ನಾಪತ್ತೆ; 6 ಗಂಟೆ ಬಳಿಕ ಪತ್ತೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ಚಾರಣಕ್ಕೆ ಹೊರಟಿದ್ದ 11 ಮಂದಿ ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ನಡೆದಿದೆ. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದು, ಡ್ರೈವರ್ ಸೇರಿ 11 ಜನ ಚಾರಣಕ್ಕೆ ಹೊರಟಿದ್ದರು. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾದಲ್ಲಿ ಟಿಕೆಟ್ ಬುಕ್ ಮಾಡಿಸಿ ದಾರಿ ತಿಳಿಯದೆ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದರು. ಕಾಡಿನಲ್ಲಿ ದಾರಿ ತಪ್ಪಿ ಇಡೀ ಕಾಡು ಸುತ್ತಿ ವಿದ್ಯಾರ್ಥಿಗಳು […]