ಉಡುಪಿಯ ನಾಗ ದೇವಸ್ಥಾನಗಳಲ್ಲಿ ಚಂಪಾ ಷಷ್ಠಿ ಸಂಭ್ರಮ
![](https://udupixpress.com/wp-content/uploads/2024/12/IMG_20241207_170852.jpg)
ಉಡುಪಿ: ಉಡುಪಿಯ ನಾಗದೇವರ ಸನ್ನಿಧಾನಗಳಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯ ನಾಗಾಲಯಗಳಲ್ಲಿ ಇಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಹೊಂದಿಕೊಂಡು ನಾಲ್ಕು ನಾಗಾಲಯಗಳಿವೆ. ಈ ಪೈಕಿ ಅತ್ಯಂತ ಪುರಾತನವಾದ ತಾಂಗೋಡು ದೇಗುಲದಲ್ಲಿ ಸಾವಿರಾರು ಜನ ಪೂಜೆ ಸಲ್ಲಿಸಿದರು. ಸುಬ್ರಹ್ಮಣ್ಯನ ಆರಾಧನೆಗೆ ಕರಾವಳಿಯಲ್ಲಿ ವಿಶೇಷ ಮಹತ್ವ ಇದೆ. ಸನ್ನಿಧಾನದಲ್ಲಿ ವಿಶೇಷ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ. ತಾಂಗೋಡು ಮಾತ್ರವಲ್ಲದೆ ಮಾಂಗೋಡು, ಅರಿತೋಡು, ಮುಚ್ಲಗೋಡು ದೇವಸ್ಥಾನಗಳಲ್ಲೂ ಸುಬ್ರಮಣ್ಯ ಷಷ್ಟಿ ಆಚರಿಸಲಾಯಿತು. ದೇವರ ಆರಾಧನೆಯ […]