ಉಡುಪಿ: ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ.

ಉಡುಪಿ: ಉಡುಪಿಯ ಮದ್ವೇಶ್ ಪಾಂಗಣ್ಣಯ ಇವರು ಸಿ. ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಇವರು ಉಡುಪಿ ಶ್ರೀ ಶ್ರೀಧರ ಮತ್ತು ಶ್ರೀಮತಿ ಯಶೋಧ ಪಾಂಗಣ್ಣಯ ಇವರ ಪುತ್ರ ರಾಗಿದ್ದು, ಉಡುಪಿಯ ಸಿ ಎ ಗಣೇಶ್ ಹೆಬ್ಬಾರ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.
ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಚಿಟ್ಪಾಡಿ ನಿವಾಸಿ ನಿವೃತ್ತ ಬಿಎಸ್ ಎನ್ ಎಲ್ ಅಕೌಂಟ್ಸ್ ಆಫೀಸರ್ ಎಂ ಶ್ರೀವತ್ಸ ಆಚಾರ್ಯ ಮತ್ತು ಉಡುಪಿ ಅಂಚೆ ಇಲಾಖೆ ಉದ್ಯೋಗಿ ಜ್ಯೋತಿ ಎಸ್ ಆಚಾರ್ಯ ದಂಪತಿಗಳ ಸುಪುತ್ರ. ಅವರು ಉಡುಪಿಯ ಭಾರತೀಶ ಆಂಡ್ ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.
ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶರಣ್ ಅದ್ವೈತ್ ಮಂಜನಬೈಲು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪತ್ರಕರ್ತ ಕಿರಣ್ ಮಂಜನಬೈಲು ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ. ಅವರು ಬೆಂಗಳೂರಿನ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.
ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು.

ವಿನಾಯಕ್ ಕಾಮತ್ ಕೆ.:ಸಿಎ ಅಂತಿಮ ಪರೀಕ್ಷೆಯಲ್ಲಿ ವಿನಾಯಕ್ ಕಾಮತ್ ಕೆ. ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಉಡುಪಿ ಕುಂಜಿಬೆಟ್ಟು ವಿನುತಾ ಕಾಮತ್ ಮತ್ತು ಗಣೇಶ್ ಕಾಮತ್ ದಂಪತಿಯ ಪುತ್ರ. ತೇಜಸ್ವಿನಿ ಕಾಮತ್:ಸಿಎ ಪರೀಕ್ಷೆಯಲ್ಲಿ ತೇಜಸ್ವಿನಿ ಕಾಮತ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಉಡುಪಿ ದೊಡ್ಡಣಗುಡ್ಡೆಯ ವಿಜಯಶ್ರೀ ಶೆಣೈ ಮತ್ತು ಉದಯ ಕುಮಾರ್ ಕಾಮತ್ ದಂಪತಿಯ […]