ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್ ವಿತರಣೆ.
ಉಡುಪಿ: ಪ್ರಸಕ್ತ ಸಾಲಿನಲ್ಲಿ ಕ.ರಾ.ರ.ಸಾ. ನಿಗಮದ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices ಮೂಲಕ ಉಚಿತವಾಗಿ ಹಾಗೂ ಕರ್ನಾಟಕ-ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ರೂ. 30/- ಸೇವಾ ಶುಲ್ಕವನ್ನು ಪಾವತಿಸಿ, ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಬಸ್ಸು ಪಾಸುಗಾಗಿ ಅರ್ಜಿ ಸಲ್ಲಿಸಲು ಡಿಕ್ಲರೇಷನ್ ಫಾರ್ಮ್ ಅನ್ನು ಸೇವಾಸಿಂಧು ತಂತ್ರಾ೦ಶದಲ್ಲಿ ಅಥವಾ ನಿಗಮದ ವೆಬ್‌ಸೈಟ್‌ನಲ್ಲಿ https://ksrtc.karnataka.gov.in/student ನ್ನು ಡೌನ್‌ಲೋಡ್ ಮಾಡಿಕೊಂಡು, ಡಿಕ್ಲರೇಷನ್ ಫಾರ್ಮ್ ಅನ್ನು ಭರ್ತಿಮಾಡಿ ಶಾಲಾ/ಕಾಲೇಜು ಮುಖೋಪಾಧ್ಯಾಯರ/ಪ್ರಾಂಶುಪಾಲರ ಸಹಿ ಮತ್ತು ಶಾಲಾ/ಕಾಲೇಜು ಮೊಹರಿನೊಂದಿಗೆ ಅರ್ಜಿ ಸಲ್ಲಿಸುವಾಗ […]