ಬ್ರಹ್ಮಾವರದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ರಾಷ್ಟ್ರೀಯ ಸಮ್ಮೇಳನ – ಚಿತ್ತಾರ

ಉಡುಪಿ:ಸೀನಿಯರ್ ಛೇಂಬರ್ ಇಂಟರ್‌ ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಲೀಜನ್‌ನ ಆತಿಥ್ಯದಲ್ಲಿ 24ನೇ ರಾಷ್ಟ್ರೀಯ ಸಮ್ಮೇಳನ ಮಾರ್ಚ್ 8 ಮತ್ತು 9 ರಂದು ಬ್ರಹ್ಮಾವರದ ಹೋಟೆಲ್ ಆಶ್ರಯದ ಆನಂದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸಮ್ಮೇಳನದ ಪೂರ್ವಭಾವಿ ಮಧ್ಯಾಹ್ನ 3 ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಿಂದ ವಾಹನ ಜಾಥಾ ಸಮ್ಮೇಳನದ ಸಭಾಂಗಣದವರೆಗೆ ಸಾಗಿ ಬರಲಿದೆ. ಸಮ್ಮೇಳನದ ಉದ್ಘಾಟನೆಯನ್ನು ಕೇರಳ ಕಲ್ಚರ್ ಮತ್ತು ಸೋಶಿಯಲ್ ಸೆಂಟರ್ (ರಿ.) ಉಡುಪಿ ಇದರ ಅಧ್ಯಕ್ಷ ಲಯನ್ ಸುಗುಣ ಕುಮಾರ್ ಉದ್ಘಾಟಿಸಲಿರುವರು. […]