ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ವತಿಯಿಂದ ನಡೆಯುತ್ತಿರುವ ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ ಜೂನ್19 ರಂದು ಸಂತೆಕಟ್ಟೆ ಕಲ್ಯಾಣಪುರ ವಾತ್ಸಲ್ಯ ಕ್ಲಿನಿಕ್ ನಲ್ಲಿ ನಡೆಯಿತು. ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮಿಯವರ ಆತಿಥ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪುಸ್ತಕ ನೀಡುವುದರ ಮೂಲಕ ಚಾಲನೆ ನೀಡಿದ ಖ್ಯಾತ ಕಲಾವಿದೆ, ನಿವೃತ್ತ ಶಿಕ್ಷಕಿ ಪ್ರತಿಭಾ ಎಲ್ ಸಾಮಗ ಮಾತನಾಡಿ, ಇತ್ತೀಚಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು […]