ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ರಕ್ತದಾನ ಶಿಬಿರ
ಉಡುಪಿ: ರಕ್ತದ ಒಂದೊಂದು ಹನಿಯೂ ಅತ್ಯಂತ ಅಮೂಲ್ಯವಾಗಿದ್ದು, ಜಗತ್ತಿನಲ್ಲಿ ಇದಕ್ಕೆ ಯಾವುದೇ ಪರ್ಯಾಯ ವಸ್ತುಗಳಿಲ್ಲ, ಇದುವರೆಗೂ ಅನ್ವೇಷಣೆಯಾಗಿಲ್ಲ. ಮಣಿಪಾಲದಂತಹ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ಯೂನಿಟ್ ಗಳ ರಕ್ತದ ಅವಶ್ಯಕತೆ ಇದ್ದು, ಇದಕ್ಕೆ ಸ್ವಯಂ ಪ್ರೇರಿತ ರಕ್ತದಾನವೇ ಪರಿಹಾರ ಎಂದು ಖ್ಯಾತ ಮೂಳೆತಜ್ಞ ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿಗಳಾದ ಡಾಕ್ಟರ್ ಶರತ್ ರಾವ್ ಅಭಿಮತ ವ್ಯಕ್ತಪಡಿಸಿದರು. ಅವರು ಭಾನುವಾರ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಮತ್ತು ಡಾ.ಟಿ.ಎಮ್.ಎ ಪೈ ಪಾಲಿಟೆಕ್ನಿಕ್ ಮಣಿಪಾಲ, ಮಣಿಪಾಲ ಕೌಶಲ್ಯ ತರಬೇತಿ […]