ಉಡುಪಿ: ಬೇಸ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿನಿ ಭಾರ್ಗವಿ ಬೋರ್ಕರ್ ಪುಣೆಯ ಎಎಫ್ಎಂಸಿಗೆ ಆಯ್ಕೆ
ಈ ಸಂಸ್ಥೆಗೆ 2021 ನೇ ಸಾಲಿಗೆ ಆಯ್ಕೆಯಾದ ಉಡುಪಿಯ ವಿದ್ಯಾರ್ಥಿನಿ ಉಡುಪಿ ಬೇಸ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿನಿ ಭಾರ್ಗವಿ ಬೋರ್ಕರ್ ಅವರು ಪುಣೆಯ ಆರ್ಮಡ್ ಪೋರ್ಸ್ ಮೆಡಿಕಲ್ ಕಾಲೇಜ್ (ಎಎಫ್ಎಂಸಿ) ಗೆ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ಆಯ್ಕೆಯಾದವರಲ್ಲಿ ಭಾರ್ಗವಿ ಅವರು ಕರ್ನಾಟಕದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಳಾಗಿದ್ದು, ಭಾರತದ ಮೂವತ್ತು ವಿದ್ಯಾರ್ಥಿನಿಯರಲ್ಲಿ ಭಾರ್ಗವಿ ಒಬ್ಬರಾಗಿದ್ದಾರೆ. ಪುಣೆಯ ಎಎಫ್ ಎಂಸಿ ಸಂಸ್ಥೆ ದೇಶಾದ್ಯಂತ ವರ್ಷಕ್ಕೆ ಮೂವತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಕರ್ನಾಟಕದಿಂದ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. […]