ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಉಡುಪಿ: ಕರಾವಳಿಯಲ್ಲಿ ಮೀನುಗಾರಿಕಾ ವೃತ್ತಿ ಮಾಡುವ ಮೊಗವೀರ ಸಮುದಾಯದ ಬಾರ್ಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಿತು. ಈ ಪ್ರಯುಕ್ತ ನಡೆದ ತೆಪ್ಪೋತ್ಸವ (ಹೊಳೆಯಾನ ) ವಿಶೇಷವಾಗಿತ್ತು. ಶ್ರೀ ಕುಲಮಹಾಸ್ತ್ರಿ ಅಮ್ಮನವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರ ಹಾಗೂ ವಿದ್ಯುದ್ವಿಪಾಲಂಕರದಿಂದ ಅಲಂಕರಿಸಿದ ಸಂಗಡ ಕಟ್ಟಿದ ಜೋಡಿ ದೋಣಿಯಲ್ಲಿ ಕೊಂಡೊಯ್ಯಲಾಯಿತು. ರಜತ ಪಲ್ಲಕ್ಕಿಯಲ್ಲಿ ಇರಿಸಿ ಭಜನೆ, ವಾದ್ಯ ಘೋಷ, ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ರಾತ್ರಿ 11 ಗಂಟೆಗೆಯಿಂದ ಪ್ರಾರಂಭಗೊಂಡು ಸರಿ ಸುಮಾರು 2 ಗಂಟೆಯ ಅವಧಿಯಲ್ಲಿ […]