ಉಡುಪಿ: ಸ್ನಾನದ ಕೋಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ.
ಪಡುಬಿದ್ರಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊರ್ವ ಮನೆಯ ಬಚ್ಚಲು ಕೋಣೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಬೇಂಗ್ರೆ ನಿವಾಸಿ ಶ್ರೀಧರ ಪೂಜಾರಿ (67). ಸೆ.15ರಂದು ಸಂಜೆಯ ವೇಳೆ ಕುತ್ತಿಗೆಗೆ ನೈಲಾನ್ ಹಗ್ಗ ಬಿಗಿದು ಕೊಂಡು ಬಚ್ಚಲು ಕೋಣೆಯಲ್ಲಿ ವಿಷ ಸೇವಿಸಿ ಬಿದ್ದಿದ್ದವರನ್ನು ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ. ಮನೆಯ ಕೋಣೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಮೃತರಿಗೆ ರಕ್ತದೊತ್ತಡ ಹಾಗೂ ಕಾಲು ನೋವು […]