ಉಡುಪಿ:ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಉಡುಪಿ:ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ “ಪದವಿಪ್ರದಾನ” ಸಮಾರಂಭವು ದಿನಾಂಕ 22 ಸಪ್ಟೆಂಬರ್ 2024 ಭಾನುವಾರದಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಶ್ರೀ ಲಕ್ಷ್ಮೀಪತಿ ಭಟ್, ಹಿರಿಯ ಉಪಾಧ್ಯಕ್ಷರು, ಗ್ಲೋಬಲ್ ಮಾರ್ಕೆಟಿಂಗ್ ಆ್ಯಂಡ್ ಕಮ್ಯುನಿಕೇಶನ್ಸ್, ರೋಬೊಸಾಫ್ಟ್ ಟೆಕ್ನಾಲಜೀಸ್ ಇವರು ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮ್ಮ ಪದವಿ ಪ್ರದಾನಉಪನ್ಯಾಸದಲ್ಲಿ ಮಾತನಾಡಿದ ಇವರು ಒಂದು ಉತ್ತಮ ಯೋಜನೆ ಇದ್ದರೆ ಸಾಲದು ಅದರ ಜೊತೆಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಬೇಕಾದಕಾರ್ಯಕ್ಷಮತೆ ಹೊಂದಿರಬೇಕು. ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಅನುದಿನವೂ […]