ಆಗಸ್ಟ್ 9ರಂದು ಬಹರೈನ್ ನಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮ

ಉಡುಪಿ: ತುಳುಕೂಟ ಬಹರೈನ್ ಸಂಸ್ಥೆಯ ಆಶ್ರಯದಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಬಹರೈನ್ ನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕ ರಾಜ್ ಕುಮಾರ್ ತಿಳಿಸಿದರು.ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟಿ ತಿಂಗಳಿನ ವಿಶೇಷತೆಗಳನ್ನು ಬಹರೈನ್ ನಲ್ಲಿ ನೆಲೆಸಿರುವ ತುಳುವರಿಗೆ, ವಿಶೇಷವಾಗಿ ಅಲ್ಲಿ ಬೆಳೆಯುತ್ತಿರುವ ತುಳುನಾಡಿನ ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಹಾಗೂ ತುಳುವರೆಲ್ಲಾ ಬೆರೆತು ಖುಷಿ ಪಡುವ ಒಂದು ಕಾರ್ಯಕ್ರಮ ಇದಾಗಿದೆ. ಸುಮಾರು ಒಂದೂವರೆ ಸಾವಿರ ತುಳುವರು ಈ […]