ಉಡುಪಿ: ಕುಸಿದು ಬಿದ್ದು ವ್ಯಕ್ತಿ ಮೃತ್ಯು.

ಉಡುಪಿ: ಉಡುಪಿ ಬಡಗುಬೆಟ್ಟು ನಿವಾಸಿ ಸುರೇಶ್‌ (59) ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮದ್ಯಸೇವನೆ ಚಟ ಹೊಂದಿದ್ದ ಅವರು ಕುಕ್ಕಿಕಟ್ಟೆ ರಸ್ತೆಯ ಬಳಿ ಬಿದ್ದು ಹಣೆಗೆ ಪೆಟ್ಟಾಗಿದ್ದು, ಸಂಬಂಧಿ ಅಕ್ಷಯ ಅವರು ಮನೆಗೆ ಕರೆದುಕೊಂಡು ಹೋಗಿ, ಅನಂತರ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.