ಆ. 23 ಮತ್ತು 24: ಕೃಷ್ಣನ ಊರಲ್ಲಿ ಅಷ್ಟಮಿ ಸಂಭ್ರಮ: ಬಗೆ ಬಗೆ ಕಾರ್ಯಕ್ರಮ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ. 23 ಮತ್ತು 24ರಂದು ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಸಂಭ್ರಮದಿಂದ ನಡೆಯಲಿದ್ದು ವಿವಿಧ ಕಾರ್ಯಕ್ರಮ ವೈವಿದ್ಯಗಳನ್ನು ಆಯೋಜಿಸಲಾಗಿದೆ. ಅಷ್ಟಮಿಯ ವಿಶೇಷ ಕಾರ್ಯಕ್ರಮಗಳ ಪೂರ್ತಿ ವಿವರ ಇಲ್ಲಿದೆ. ಏನೇನ್ ವಿಶೇಷ? ಆ. 24ರಂದು ಉಡುಪಿ ಕನಕ ಸಾಂಸ್ಕೃತಿಕ ವೇದಿಕೆಯ ಮಧುಸೂದನ ಪೂಜಾರಿ ನೇತೃತ್ವದಲ್ಲಿ ಪೂರ್ವ ಮುಂಬಯಿ ಸಾಂತಾಕ್ರೂಸ್ ಬಾಲಮಿತ್ರ ಮಂಡಳಿಯ ಅಲಾರೆ ಗೋವಿಂದ ತಂಡ 50 ಅಡಿ ಎತ್ತರದಲ್ಲಿರುವ ಮಡಿಕೆ ಒಡೆಯಲಿದೆ. ಬೆಳಗ್ಗೆ 9ಕ್ಕೆ ಶ್ರೀಕೃಷ್ಣ ಮಠದ ವಸಂತ ಮಂಟಪದಲ್ಲಿ ಚಾಲನೆಗೊಂಡು, […]