ಉಡುಪಿಯ ಯುವ ಕಲಾವಿದ ವೆಲ್ರಾಯ್ ಡಿಕ್ಸನ್ ಡಿಸೋಜಾರ ಕುಂಚದಲ್ಲಿ ಮೂಡಿಬಂದ ಲೆಜೆಂಡ್ ರತನ್ ಟಾಟಾ ಚಿತ್ರ
ಉಡುಪಿ: ಕಲೆ ಎಂಬುವುದು ಅಷ್ಟು ಸುಲಭದಲ್ಲಿ ಯಾರಿಗೂ ಒಲಿಯುವುದಿಲ್ಲ. ಆದ್ರೆ ಇಲ್ಲೊಬ್ಬ ಯುವಕ ಯಾವುದೇ ಕಲಿಕೆ, ಗುರು ಇಲ್ಲದೆ, ತಾನಾಗಿಯೇ ಚಿತ್ರಕಲೆಯನ್ನು ಸಿದ್ಧಿಸಿಕೊಂಡಿದ್ದಾನೆ. ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವೆಲ್ರಾಯ್ ಡಿಕ್ಸನ್ ಡಿಸೋಜಾ ಅವರೇ ಈ ಅದ್ಭುತ ಚಿತ್ರಕಲಾವಿದ. ಚಿತ್ರಕಲೆಯನ್ನು ಯಾವುದೇ ಗುರುಗಳಿಲ್ಲದೆ ತಾವೇ ಕಲಿತು, ಈಗ ತಮ್ಮ ಕಲೆಯ ಪ್ರದರ್ಶನ ಮಾಡುವ ಹಂತಕ್ಕೆ ತಲುಪಿದ್ದಾರೆ. ಕಲೆಯ ಮೇಲಿರುವ ಆಸಕ್ತಿಯೇ ಇಂತಹ ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿದೆ. ವೆಲ್ರಾಯ್ ಡಿಕ್ಸನ್ ಅವರು ಈಗಾಗಲೇ ಹಲವು […]