ಕೊರೊನಾ ಸೋಂಕು ಹರಡುವ ಭೀತಿ: ಉಡುಪಿ ನಗರದ ಅಂಗಡಿ ಮುಂಗಟ್ಟು ಮುಚ್ಚುವಂತೆ ಪೌರಾಯುಕ್ತರಿಂದ ಸೂಚನೆ
ಉಡುಪಿ: ಮಹಾಮಾರಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರದ ಜನನಿಬಿಡ ಪ್ರದೇಶಗಳ ಅಂಗಡಿ ಮುಂಗಟ್ಟುಗಳನ್ನು ಉಡುಪಿ ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿಗಳು ಖುದ್ದಾಗಿ ಮುಚ್ಚಿಸಿದರು. ಕೊರೊನಾ ಸೋಂಕು ಹರಡುವ ಭೀತಿ ಇದ್ದು, ಈ ನಿಟ್ಟಿನಲ್ಲಿ ಯಾರು ಗುಂಪು ಗೂಡಬಾರದು ಎಂದು ಅಧಿಕಾರಿಗಳು ಮೈಕ್ ನಲ್ಲಿ ಘೋಷಣೆ ಮಾಡಿದರು. ಸಿಟಿ ಬಸ್ ನಿಲ್ದಾಣದಲ್ಲಿ ತೆರೆಯಲಾಗಿದ್ದ ಬಟ್ಟೆ, ಚಪ್ಪಲಿ ಅಂಗಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದರು. ಹೋಟೆಲ್ ಗಳಲ್ಲಿ ಆಹಾರಗಳನ್ನು ಪಾರ್ಸೆಲ್ ಮಾತ್ರ ನೀಡಬೇಕು ಎಂದು ಸೂಚನೆ ನೀಡಿದರು.