ಕೃಷಿ ಸೋಲಾರ್ ಪಂಪ್‌ಸೆಟ್ ಸಬ್ಸಿಡಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ-ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80 ರಷ್ಟು ಸಹಾಯಧನ.

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಒಂದು ಅದ್ಭುತವಾದ ಅವಕಾಶವನ್ನು ಒದಗಿಸಿದೆ. ಸೌರ ಕೃಷಿ ಪಂಪ್‌ಸೆಟ್ ಯೋಜನೆ 2024(Solar Farm Pumpset Scheme 2024) ರ ಅಡಿಯಲ್ಲಿ, ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80 ರಷ್ಟು ಸಹಾಯಧನ(subsidy)ದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಬಹುದು. ಸಾಂಪ್ರದಾಯಿಕ ಗ್ರಿಡ್ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರೈತರಲ್ಲಿ ಸೌರಶಕ್ತಿ ಬಳಕೆಯನ್ನು ಉತ್ತೇಜಿಸಲು, ರಾಜ್ಯ ಸರ್ಕಾರ ಕುಸುಮ್ ಬಿ ಯೋಜನೆ(Kusum b scheme)ಯಡಿ ಸೌರ ಪಂಪ್‌ಸೆಟ್‌ಗಳಿಗೆ ಶೇ.80ರಷ್ಟು ಸಬ್ಸಿಡಿ ನೀಡುತ್ತಿದೆ. […]